Wednesday, April 28, 2010

ಎಲ್ಲಿಂದ ಬಂದೆಯೇ ನೀನು.....?

ಇಬ್ಬನಿಯ ಹನಿಗಳು ಸೇರಿ
ಮುತ್ತಿನ ಹಾರವ ಹೆಣೆದಂತೆ
ಅಮೃತ ಸಿಂಚನ ನಿನ್ನ ನಗುವು
ಹಾಲು ಸುರಿದಂತೆ......

ಎಲ್ಲಿಂದ ಬಂದೆಯೇ ನೀನು.....?
ನೀನೇನೆ ದೇವೆತೆಯೇನು.....?

ಮುಸ್ಸಂಜೆ ಹೊತ್ತಿನಲ್ಲಿ ನಿನ ಕಂಡ ಆ ಸೂರ್ಯ,
ನಾಚುತಲಿ ಕೆಂಪಾಗಿ ಮರೆಯಾದನೆ.
ಹುಣ್ಣಿಮೆಯ ರಾತ್ರಿಯಲಿ ನಿನ ನೋಡಿ ಚಂದಿರನು
ಬೆಳುಗುವುದ ಮರೆತ್ಹೋಗಿ ಕರಗಿ ಹೋದನೇ..

ಎಲ್ಲಿಂದ ಬಂದೆಯೇ ನೀನು.....?
ಭುವಿಗಿಳಿದ ಅಪ್ಸರೆಯೇನು.....?

Saturday, April 24, 2010

ಒಲವೇ

ಒಲವೇ ನನ್ನೊಲುಮೆಯ ಹೂವೇ,
ಕೊಡುವೆ ಈ ಜೀವವ ಕೊಡುವೇ.
ನಿನ್ನ ಪ್ರೀತಿಯ ಸವಿ ಇರದಾ ನನ್ನೀ ಜೀವನವೇಕೆ?

ನಿನ ಒಂದು ನೋಟಕಾಗಿ ನಾ ನೂರು ಜನ್ಮ ಕಾಯುವೆ,
ನಿನ ಒಂದು ನಗುವಿಗಾಗಿ ನಾ ಪ್ರಾಣವನ್ನೇ ಕೊಡುವೆ.
ನಾ ಕಾಣೋ ಪ್ರತಿ ಕನಸು ನಿಂದೇನೆ.. ನಿಂದೇನೆ.

ಒಲವೇ ನನ್ನೊಲುಮೆಯ ಹೂವೇ,
ಕೊಡುವೆ ಈ ಜೀವವ ಕೊಡುವೇ,
ನಿನ್ನ ಪ್ರೀತಿಯ ಸವಿ ಇರದಾ ನನ್ನೀ ಜೀವನವೇಕೆ?


ನನ್ನ ಎದೆಗೆ, ಪ್ರೀತಿ ಗೂಡಿಗೆ,
ಪ್ರೇಮ ಪಕ್ಷಿಯಂತೆ ನೀನು ಬರಬಾರದೆ?
ನನ್ನ ಮನಸುನು, ನನ್ನ ಮನೆಯನು,
ಬೆಳ್ಳಿ ದೀಪದಂತೆ ನೀನು ಬೆಳಗಬಾರದೆ?

ನೀ ದೂರವಾದ ಆ ಕ್ಷಣ,
ನನ ಸಾವು ಖಂಡಿತ ಮರುಕ್ಷಣಾ...

ನೀನಿಲ್ಲದೆ ಏನಿಲ್ಲಾ,
ನೀನಗಾಗೆ ಬದುಕೆಲ್ಲಾ...

ಒಲವೇ ನನ್ನೊಲುಮೆಯ ಹೂವೇ,
ಕೊಡುವೆ ಜೀವವ ಕೊಡುವೇ.
ನಿನ್ನ ಪ್ರೀತಿಯ ಸವಿ ಇರದಾ ನನ್ನೀ ಜೀವನವೇಕೆ?

ಹೃದಯ ಬಡಿತವು, ನಾಡಿ ಮಿಡಿತವು,
ಪ್ರತಿ ಕ್ಷಣ ನಿನ್ನ ಹೆಸರ ಹೇಳುತಲಿದೆ,
ನನ್ನ ತನು ಮನ, ನನ್ನ ಜೀವನ,
ಪ್ರತಿ ದಿನ ನಿನಗಾಗಿ ಕಾಯುತಲಿದೆ.

ನೀನೊಮ್ಮೆ ನೋಡಿ ನಕ್ಕರೆ,
ನನ್ನ ಬಾಳು ಹಾಲು ಸಕ್ಕರೆ...

ನೀ ಹೆಜ್ಜೆ ಇಡುವಲ್ಲಿ,
ಹೂವಾಗಿ ನಾ ಬರುವೆ...


ಒಲವೇ ನನ್ನೊಲುಮೆಯ ಹೂವೇ,
ಕೊಡುವೆ ಜೀವವ ಕೊಡುವೇ.
ನಿನ್ನ ಪ್ರೀತಿಯ ಸವಿ ಇರದಾ ನನ್ನೀ ಜೀವನವೇಕೆ?

ನಿನ ಒಂದು ನೋಟಕಾಗಿ ನಾ ನೂರು ಜನ್ಮ ಕಾಯುವೆ,
ನಿನ ಒಂದು ನಗುವಿಗಾಗಿ ನಾ ಪ್ರಾಣವನ್ನೇ ಕೊಡುವೆ.
ನಾ ಕಾಣೋ ಪ್ರತಿ ಕನಸು ನಿಂದೇನೆ.. ನಿಂದೇನೆ.

ನನ್ನವಳ ಅಂದ

ನಿನ್ನ ಸಿಹಿನುಡಿಯ ಕೇಳಿ ಕೋಗಿಲೆ
ಹಾಡದೆ ಮೂಕವಾಯಿತು,
ನಿನ್ನ ನಡೆಯನ್ನು ಕಂಡ ನವಿಲು
ನರ್ತಿಸದೆ ಸುಮ್ಮನಾಯಿತು,
ನಿನ್ನ ಅಂದವ ನೋಡಿ ಮೊಗ್ಗು
ಅರಳದೆ ಬಾಡಿ ಹೋಯಿತು.

ಬರಬೇಡಾ..........ಗೆಳತಿ ಬೆಳದಿಂಗಳಲಿ.. ನೀನು
ಬರಬೇಡಾ..........ಚಂದ್ರ, ಮರೆಯಾಗಿ... ಹೋದ
ಮೋಡಗಳ......... ಹಿಂದೆ, ನಿನ್ನ
ಹಾಲಂಥ ಮೈ ಬಣ್ಣ ನೋಡಿ..........

ನಗಬೇಡಾ........ಗೆಳತಿ ಮುಸ್ಸಂಜೆ ಹೊತ್ತಲಿ ನೀನು
ನಗಬೇಡಾ ........ಮಲ್ಲಿಗೆ, ತನಗೇನು ಕೆಲಸ ಎಂದು
ಅರಳದೆ ...............ಹೋಯಿತು, ನಿನ್ನ
ಮುದ್ದಾದ ನಗುವ ನೋಡಿ.

ನಿನ್ನ ಮುಂಗುರಳ ಕಪ್ಪು ಕಂಡ
ಕತ್ತಲೆಯು ಸರಿದು ಹೋಯಿತು.
ನಿನ್ನ ಕೆಂದುಟಿಯ ಕೆಂಪು ಕಂಡ
ಮುಸ್ಸಂಜೆ ಸೂರ್ಯ ನಾಚಿತು.
ನಿನ್ನ ಕಣ್ಣಂಚಿನ ಮಿಂಚು ಕಂಡ
ಕಾರ್ಮೋಡ ಕರಗಿ ನೀರಾಯಿತು.

ಹೋಗದಿರು........ಗೆಳತಿ, ಹೂದೋಟಕೆ ನೀನು
ಹೋಗದಿರು........ಹೋದರೆ, ಹೂವನ್ನೇ ಮರೆತ
ದುಂಬಿಗಳ ....... ಹಿಂಡು, ಬಂದಾವು
ನಿನ್ನ ಹಿಂದೆ ಓಡಿ.

ಬಾರದಿರು..........ಗೆಳತಿ, ಕಡಲಿನ ತೀರಕೆ ನೀನು
ಬಾರದಿರು........ಬಂದರೆ, ನಿಂತಾವು ನಿಂತಲೇ
ಅಲೆಗಳು........ನಿನ್ನ
ವ್ಯೆಯಾರವನ್ನು ನೋಡಿ.


ನಿನ್ನ ಸಿಹಿನುಡಿಯ ಕೇಳಿ ಕೋಗಿಲೆ
ಹಾಡದೆ ಮೂಕವಾಯಿತು,
ನಿನ್ನ ನಡೆಯನ್ನು ಕಂಡ ನವಿಲು
ನರ್ತಿಸದೆ ಸುಮ್ಮನಾಯಿತು,
ನಿನ್ನ ಅಂದವ ನೋಡಿ ಮೊಗ್ಗು
ಅರಳದೆ ಬಾಡಿ ಹೋಯಿತು.

ನೀ ಬರಬಾರದೇನೆ?

ಹೃದಯದಾ ಪುಟಗಳಲಿ
ಬರೆದಿರುವೆ ನಿನ ಹೆಸರ,
ಕನಸಿನ ಆಸೆಗಳಿಗೆ
ತುಂಬಿರುವೆ ಹೊಸ ಹುಸಿರ

ಹೃದಯದ ಮಿಡಿತವ
ಕನಸಿನ ಕಲರವ
ಕೇಳಲು ನೀ ಬರಬಾರದೇನೆ?


ಚಂದ್ರನ ಕಾಡಿ
ಬೆಳದಿಂಗಳ ಹಾಸಿರುವೆ
ತಂಗಾಳಿಯ ಬೇಡಿ ತಂಪನು ತಂದಿರುವೆ,
ಹೊವಗಳ ಕೇಳಿ ಪರಿಮಳವ ಚೆಲ್ಲಿರುವೆ,
ನಿನಗಾಗಿ ನಾನು ಕಾಯುತಲಿರುವೆ.

ತಂಪಾಗಿ ಹಾಯಾಗಿ ಪ್ರೀತಿಸಲು
ನೀ ಬರಬಾರದೇನೆ?

ನನ್ನವಳ ಪ್ರೀತಿ



ಚಂದ್ರನ ಕೇಳಿದೆ ನಾ
ಕಂಡಿರುವೆಯ ನನ್ನವಳ ಪ್ರೀತಿ,
ಬರಡಾದ ಬಾಳಿಗೆ
ಹಸಿರಾಗುವ ರೀತಿ.

ಇದು ಬರಿ ಪ್ರೀತಿಯಲ್ಲ
ಅಕ್ಷಯ ಪಾತ್ರೆ ,
ಸವಿದಷ್ಟು ತೀರದು
ಅವಳೋಂದಿಗಿನ ಬಾಳ ಯಾತ್ರೆ.

ಮರೆಸುವುದು ನೋವನ್ನ
ಅವಳ ಆಲಿಂಗನ
ತುಂಬುವುದು ಚೈತನ್ಯ
ಅವಳ ಚುಂಬನ.

ಚಂದ್ರ ಹೇಳಿದ ನನಗೆ
ನನ್ನ ಬೆಳದಿಂಗಳಾಣೆ,
ನಿನ್ನವಳ ಪ್ರೀತಿಯನು
ಬೇರೆಲ್ಲೂ ನಾ ಕಾಣೆ.