ನನ್ನವಳ ಪ್ರೀತಿ
ಚಂದ್ರನ ಕೇಳಿದೆ ನಾಕಂಡಿರುವೆಯ ನನ್ನವಳ ಪ್ರೀತಿ,
ಬರಡಾದ ಬಾಳಿಗೆಹಸಿರಾಗುವ ರೀತಿ.
ಇದು ಬರಿ ಪ್ರೀತಿಯಲ್ಲಅಕ್ಷಯ ಪಾತ್ರೆ ,
ಸವಿದಷ್ಟು ತೀರದುಅವಳೋಂದಿಗಿನ ಈ ಬಾಳ ಯಾತ್ರೆ.
ಮರೆಸುವುದು ನೋವನ್ನಅವಳ ಆಲಿಂಗನತುಂಬುವುದು ಚೈತನ್ಯಅವಳ ಆ ಚುಂಬನ.
ಚಂದ್ರ ಹೇಳಿದ ನನಗೆನನ್ನ ಬೆಳದಿಂಗಳಾಣೆ,
ನಿನ್ನವಳ ಪ್ರೀತಿಯನುಬೇರೆಲ್ಲೂ ನಾ ಕಾಣೆ.
No comments:
Post a Comment