Monday, February 25, 2013

ಕಲ್ಪನೆ ನಿಜವಾಗಿ

ಕಲ್ಪನೆ ನಿಜವಾಗಿ
ಕನಸು ನನಸಾಗಿ
ನನ ಉಸಿರಿಗೆ ಉಸಿರಾಗಿ, ನೀನು.....  ಬಂದೆ ಜೊತೆಯಾಗಿ
ನನ್ನ ಜೀವದ ಜೊತೆಯಾಗಿ.

ಸ್ನೇಹಕೆ ಹೆಸರಾಗಿ
ಪ್ರೀತಿಗೆ ಧ್ವನಿಯಾಗಿ
ನನ ಪ್ರಾಣದ ಪ್ರಾಣವಾಗಿ....ನೀನು ಬಂದೆ ನನಗಾಗಿ.
ನನ್ನ ಬಾಳಿನ ಬೆಳಕಾಗಿ.

ನೀನು ಜೊತೆಯಾಗಿರಲು
ಸ್ವರ್ಗವೇ ಧರೆಗಿಳಿದಂತೆ.
ನನ್ನಲಿ ಒಂದಾಗಿರಲು....
ಬಾಳು ಸಕ್ಕರೆಯಂತೆ
ನಗಲು...ನೀನು  ನಗಲು....

ಹಾಲ್ಜೇನ ಮಳೆ ಸುರಿದಂತೆ.... 


ನೀನೇ  ತವರಾಗಿರಲು,
ನನಗಿಲ್ಲಾ ಲೋಕದ ಚಿಂತೆ...
ನೀನೇ ಮಡಿಲಾಗಿರಲು, 
ನೋವೆಲ್ಲಾ ನಾನು ಮರತೆ
ಅಳಲು.... ನಾನು ಅಳಲು
ನೀ.. ಪೊರೆದೆ ದೇವತೆಯಂತೆ..


ಕಲ್ಪನೆ ನಿಜವಾಗಿ
ಕನಸು ನನಸಾಗಿ
ನನ ಉಸಿರಿಗೆ ಉಸಿರಾಗಿ, ನೀನು.....  ಬಂದೆ ಜೊತೆಯಾಗಿ
ನನ್ನ ಜೀವದ ಜೊತೆಯಾಗಿ.

ಸ್ನೇಹಕೆ ಹೆಸರಾಗಿ
ಪ್ರೀತಿಗೆ ಧ್ವನಿಯಾಗಿ
ನನ ಪ್ರಾಣದ ಪ್ರಾಣವಾಗಿ....ನೀನು ಬಂದೆ ನನಗಾಗಿ
ನನ್ನ ಬಾಳಿನ ಬೆಳಕಾಗಿ.










No comments: